ಜಾನ್ ಅಬ್ರಾಹಂ (ಹಿಂದಿ:जॉन अब्राहम); ೧೯೭೨ರ ಡಿಸೆಂಬರ್ರಂ೧೭ದು ಜನಿಸಿದರು) ಒಬ್ಬ ಭಾರತೀಯ ನಟ ಮತ್ತು ರೂಪದರ್ಶಿ. ಹಲವಾರು ಜಾಹೀರಾತುಗಳು ಮತ್ತು ಕಂಪನಿಗಳಿಗೆ ಮಾಡೆಲಿಂಗ್ ಮಾಡಿದ ಅಬ್ರಾಹಂ ಜಿಸ್ಮ್‌ (2003) ಚಿತ್ರದೊಂದಿಗೆ ಚಲನಚಿತ್ರ ರಂಗಕ್ಕೆ ಪ್ರವೇಶಿಸಿದರು. ಈ ಚಿತ್ರದಿಂದಾಗಿ ಅವರು ಫಿಲ್ಮ್‌ಫೇರ್ ಅತ್ಯುತ್ತಮ ಪ್ರಥಮ ಪ್ರವೇಶ(ಡಿಬಟ್) ಪ್ರಶಸ್ತಿಗೆ ನಾಮನಿರ್ದೇಶಗೊಂಡರು. ಇದರ ನಂತರ ಆತನ ಮೊದಲು ವಾಣಿಜ್ಯವಾಗಿ ಯಶಸ್ಸು ಗಳಿಸಿದ ಚಿತ್ರವೆಂದರೆ ಧೂಮ್‌ (2004). ಧೂಮ್‌ ಚಿತ್ರದಲ್ಲಿ ನಕಾರಾತ್ಮಕ ಪಾತ್ರಕ್ಕಾಗಿ ಮತ್ತು ನಂತರ ಜಿಂದಾ (2006) ಚಿತ್ರಕ್ಕಾಗಿ ಆತ ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು. ಆತ ನಂತರ ಪ್ರಮುಖ ವಿಮರ್ಶಾತ್ಮಕ ಯಶಸ್ಸು ಗಳಿಸಿದ ವಾಟರ್ (2005) ಚಿತ್ರದಲ್ಲಿ ಕಾಣಿಸಿಕೊಂಡರು. 2007ರಲ್ಲಿ ಆತ ಬಬೂಲ್ (2006) ಚಿತ್ರಕ್ಕಾಗಿ ಅತ್ಯುತ್ತಮ ಪೋಷಕ ನಟನೆಗಾಗಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು. == ಆರಂಭಿಕ ಜೀವನ ಮತ್ತು ಶಿಕ್ಷಣ == ಅಬ್ರಾಹಂ ಮುಂಬಯಿಯಲ್ಲಿ ಮಲಯಾಳಿ ತಂದೆ ಮತ್ತು ಪರ್ಶಿ ತಾಯಿಗೆ ಜನಿಸಿದರು. ಆತನ ತಂದೆ ಕೇರಳಾದ ಅಲ್ವಾಯೆಯ ಒಬ್ಬ ವಾಸ್ತುಶಿಲ್ಪಿ; ತಾಯಿಯ ಹೆಸರು ಫಿರೋಜ ಇರಾನಿ. ಅಬ್ರಾಹಂನ ಪರ್ಶಿ ಹೆಸರು "ಫರಾನ್". ಆದರೆ ಆತನ ತಂದೆ ಸಿರಿಯನ್ ಕ್ರಿಶ್ಚಿಯನ್ (ಸಿರಿಯನ್ ಮಲಬಾರ್ ನಸ್ರಾನ್) ಆದ್ದರಿಂದ ಆತನಿಗೆ "ಜಾನ್" ಎಂಬ ಹೆಸರಿಟ್ಟರು. ಆತನಿಗೆ ಒಬ್ಬ ತಮ್ಮನಿದ್ದಾನೆ, ಹೆಸರು ಅಲನ್. ಆತ ಮುಂಬಯಿಯ ಮಹಿಮ್‌ನ ಬಾಂಬೆ ಸ್ಕಾಟಿಶ್ ಸ್ಕೂಲ್‌ನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದರು ಹಾಗೂ ಮುಂಬಯಿ ಎಜುಕೇಶನಲ್ ಟ್ರಸ್ಟ್‌ನಲ್ಲಿ () ಮುಗಿಸಿದರು. == ವೃತ್ತಿಜೀವನ == === ಮಾಡೆಲಿಂಗ್ === ಅಬ್ರಾಹಂ ಪಂಜಾಬಿ ಗಾಯಕ ಜ್ಯಾಜಿ Bಯ "ಸುರ್ಮಾ" ಹಾಡಿನ ಸಂಗೀತ-ವೀಡಿಯೊದಲ್ಲಿ ಕಾಣಿಸಿಕೊಳ್ಳುವ ಮೂಲಕ ತನ್ನ ಮಾಡೆಲಿಂಗ್ ವೃತ್ತಿಜೀವನವನ್ನು ಆರಂಭಿಸಿದರು. ಆತ ನಂತರ ಮಾಧ್ಯಮ ಸಂಸ್ಥೆ ಟೈಮ್ ಆಂಡ್ ಸ್ಪೇಸ್ ಮೀಡಿಯಾ ಎಂಟರ್ಟೈನ್ಮೆಂಟ್ ಪ್ರೊಮೋಶನ್ಸ್ ಲಿಮಿಟೆಡ್ಅನ್ನು ಸೇರಿಕೊಂಡರು, ಇದು ನಂತರ ಹಣಕಾಸಿನ ಸಮಸ್ಯೆಯಿಂದಾಗಿ ಮುಚ್ಚಲ್ಪಟ್ಟಿತು. ನಂತರ ಆತ ಎಂಟರ್‌ಪ್ರೈಸಸ್-ನೆಕ್ಸಸ್‌ನಲ್ಲಿ ಮಾಧ್ಯಮ-ಯೋಜಕನಾಗಿ ಕೆಲಸ ಮಾಡಿದರು. 1999ರಲ್ಲಿ ಆತ ಗ್ಲ್ಯಾಡ್ರ್ಯಾಗ್ಸ್ ಮ್ಯಾನ್‌ಹಂಟ್ ಸ್ಪರ್ಧೆಯನ್ನು ಗೆದ್ದುಕೊಂಡರು ಹಾಗೂ ಮ್ಯಾನ್‌ಹಂಟ್ ಇಂಟರ್‌ನ್ಯಾಷನಲ್‌ಗಾಗಿ ಫಿಲಿಪೈನ್ಸ್‌ಗೆ ಹೋದರು, ಅಲ್ಲಿ ಎರಡನೇ ಸ್ಥಾನವನ್ನು ಗಳಿಸಿದರು. ಇದಾದ ನಂತರ ಆತ ಸಿಂಗಾಪುರದಲ್ಲಿ ಕ್ಯಾರೀ ಮಾಡೆಲ್ಸ್‌ಗೆ ಸಹಿಹಾಕಿದರು ಮತ್ತು ಅಲ್ಲಿ ಸ್ವಲ್ಪ ಕಾಲ ಮಾಡೆಲಿಂಗ್ ಮಾಡಿದರು; ನಂತರ ಹಾಂಗ್ ಕಾಂಗ್, ಲಂಡನ್ ಮತ್ತು ನ್ಯೂಯಾರ್ಕ್ ಸಿಟಿ ಮೊದಲಾದೆಡೆಗಳಲ್ಲಿ ರೂಪದರ್ಶಿಯಾಗಿ ಕಾರ್ಯನಿರ್ವಹಿಸಿದರು. ಆತ ಅನೇಕ ವಾಣಿಜ್ಯ ಜಾಹೀರಾತುಗಳಲ್ಲಿ ಮತ್ತು ಪಂಕಜ್ ಉದಾಸ್, ಹಂಸ್ ರಾಜ್ ಹಂಸ್ ಮತ್ತು ಬಬುಲ್ ಸುಪ್ರಿಯೊ ಮೊದಲಾದ ಗಾಯಕರ ಸಂಗೀತ-ವೀಡಿಯೊಗಳಲ್ಲೂ ಕಾಣಿಸಿಕೊಂಡಿದ್ದಾರೆ. ನಟನೆಯ ಕೌಶಲಗಳನ್ನು ಸುಧಾರಿಸಲು ಅಬ್ರಾಹಂ ಕಿಶೋರ್ ನಮಿತ್ ಕಪೂರ್‌ರ ನಟನಾ ಪ್ರಯೋಗಶಾಲೆಯನ್ನು ಸೇರಿಕೊಂಡರು ಮತ್ತು ರೂಪದರ್ಶಿಯಾಗಿ ಕಾರ್ಯನಿರ್ವಹಿಸುತ್ತಲೇ ನಟನಾ ಕೋರ್ಸನ್ನು ಪೂರ್ಣಗೊಳಿಸಿದರು. === ನಟನೆ === ಅಬ್ರಾಹಂ ತನ್ನ ನಟನೆಯನ್ನು ಭಯಾನಕ ಚಿತ್ರ ಜಿಸ್ಮ್‌ ‌ನಿಂದ (2003) ಆರಂಭಿಸಿದರು. ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯ ಪ್ರಕಾರ ಸುಮಾರು 13,25,00,000ನಷ್ಟು ಗಳಿಸುವುದರೊಂದಿಗೆ "ಸಾಧಾರಣಕ್ಕಿಂತ ಮೇಲಿನ" ಸ್ಥಾನವನ್ನು ಪಡೆಯಿತು. ಚಿತ್ರೀಕರಣದ ಸಂದರ್ಭದಲ್ಲಿ ಅಬ್ರಾಹಂ ಮತ್ತು ಸಹ-ನಟಿ ಬಿಪಾಶ ಬಸು ಪರಸ್ಪರ ಡೇಟಿಂಗ್ ಮಾಡಲು ಆರಂಭಿಸಿದರು. ಆತನ ನಂತರದ ಚಲನಚಿತ್ರಗಳೆಂದರೆ ಪರಸಾಮಾನ್ಯ ಭಯಾನಕ ಚಿತ್ರ ಸಾಯ (2003), ಪೂಜ ಭಟ್‌ರ ಪ್ರಥಮ ನಿರ್ದೇಶನದ ಚಿತ್ರ ಪಾಪ್ (2004) ಮತ್ತು ಅಹ್ಮದ್ ಖಾನ್‌ನ ಲಕೀರ್– ಫಾರ್ಬಿಡನ್ ಲೈನ್ಸ್ (2004). ಆತ 2004ರಲ್ಲಿ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಒಂದು ಸಾಹಸಮಯ ಚಿತ್ರ ಧೂಮ್‌ ‌ನಲ್ಲಿ ಕಬಿರ್ ಎಂಬ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಂಡರು. ಆ ಚಿತ್ರವು ಆ ವರ್ಷದ ಅತ್ಯಂತ ಹೆಚ್ಚು ಲಾಭ ಗಳಿಸಿದ ಚಿತ್ರವಾಯಿತು. 2005ರಲ್ಲಿ ಆತ ಅಪ್ರಾಕೃತ ಭಯಾನಕ ಚಿತ್ರ ಕಾಲ್ ಮತ್ತು ಹಾಸ್ಯ ಚಿತ್ರ ಗರಂ ಮಸಾಲ ದಲ್ಲಿ ನಟಿಸಿದರು, ಇದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಗಳಿಕೆಯನ್ನು ಪಡೆಯಿತು. ಅನಂತರ ಆತ ವಿಮರ್ಶಾತ್ಮಕವಾಗಿ ಪ್ರಶಂಸೆಯನ್ನು ಗಳಿಸಿದ ವಾಟರ್ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದರು. ಇದು 1930ರ ಬ್ರಿಟಿಷ್ ಇಂಡಿಯಾದಲ್ಲಿ ಹಿಂದು ವಿಧವೆಯರಿಗೆ ಒದಗಿದ ದುರಂತ ಗತಿಯನ್ನು ಚಿತ್ರಿಸುತ್ತದೆ. ಈ ಚಿತ್ರವನ್ನು ಕೆನಡಾದ ಸ್ವತಂತ್ರ ಚಿತ್ರ-ನಿರ್ಮಾಪಕಿ ದೀಪಾ ಮೆಹ್ತಾ ಬರೆದು ನಿರ್ದೇಶಿಸಿದರು. ಇದು ಅಂತಾರಾಷ್ಟ್ರೀಯವಾಗಿ ಜನಪ್ರಿಯವಾಯಿತು ಮತ್ತು 79ತ್ ಅಕಾಡೆಮಿ ಅವಾರ್ಡ್ಸ್‌ನಲ್ಲಿ 2006ರ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರಕ್ಕಾಗಿ ಅಕಾಡೆಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿತು. 2006ರ ಬೇಸಿಗೆಯಲ್ಲಿ ಅಬ್ರಾಹಂ ಸಲ್ಮಾನ್ ಖಾನ್, ಜಾಯೆದ್ ಖಾನ್, ಕರೀನಾ ಕಪೂರ್, ಇಶಾ ಡಿಯೋಲ್, ಶಾಹಿದ್ ಕಪೂರ್ ಮತ್ತು ಮಲ್ಲಿಕಾ ಶೆರಾವತ್ ಮೊದಲಾದ ಬಾಲಿವುಡ್ ನಟರೊಂದಿಗೆ "ರಾಕ್‌ಸ್ಟಾರ್ಸ್ ಕನ್ಸರ್ಟ್"‌ನಲ್ಲಿ ಭಾಗವಹಿಸಿದರು. ಅದೇ ವರ್ಷದಲ್ಲಿ ಆತ ಜಿಂದಾ , ಟ್ಯಾಕ್ಸಿ ನಂಬರ್ 9211 , ಬಬೂಲ್ ಮತ್ತು ಕಾಬುಲ್ ಎಕ್ಸ್‌ಪ್ರೆಸ್ ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿದರು. ಅವುಗಳಲ್ಲಿ ಟ್ಯಾಕ್ಸಿ ನಂಬರ್ 9211 ಮತ್ತು ಕಾಬುಲ್ ಎಕ್ಸ್‌ಪ್ರೆಸ್ ಚಿತ್ರಗಳು ಗಮನಾರ್ಹ ಯಶಸ್ಸು ಕಂಡವು. ನಿಖಿಲ್ ಅಡ್ವಾಣಿಯ ಬಹು-ನಟರ ಚಿತ್ರ --: ಅಬ್ರಾಹಂನ 2007ರ ಮೊದಲ ಚಿತ್ರವಾಗಿದೆ. ಈ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಗಳಿಸಲು ವಿಫಲವಾಯಿತು. ಆದರೂ ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ಕಂಡಿತು. 2007ರ ಆತನ ಕೊನೆಯ ಎರಡು ಚಿತ್ರಗಳೆಂದರೆ - ಒಂದು ಭಯಾನಕ ಚಿತ್ರ ನೊ ಸ್ಮೋಕಿಂಗ್ ಮತ್ತು ಇನ್ನೊಂದು ಕ್ರೀಡಾ ಚಿತ್ರ ಧನ್ ಧನಾ ಧನ್ ಗೋಲ್ . 2008ರಲ್ಲಿ ಅಬ್ರಾಹಂ ದೋಸ್ತಾನ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಪ್ರಿಯಾಂಕ ಚೋಪ್ರ ಒಂದಿಗೆ ನಟಿಸಿದರು, ಇದು ಆ ವರ್ಷದ ಆತನ ಏಕೈಕ ಚಿತ್ರ. ಕರಣ್ ಜೋಹಾರ್ ನಿರ್ದೇಶಿಸಿದ ಈ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸು ಗಳಿಸಿತು. 2009ರ ಆತನ ಮೊದಲನೇ ಚಿತ್ರ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಮತ್ತೊಂದು ಬಹುನಿರೀಕ್ಷಿತ ನ್ಯೂಯಾರ್ಕ್ . ಈ ಚಿತ್ರವು ವಿಮರ್ಶಾತ್ಮಕವಾಗಿ ಮತ್ತು ವಾಣಿಜ್ಯವಾಗಿ ಬಹು ಜನಪ್ರಿಯವಾಯಿತು. ಇದು ಮೂವರು ಪ್ರಾಣ ಸ್ನೇಹಿತರ ನ್ಯೂಯಾರ್ಕ್ ನಗರದ ಸೆಪ್ಟೆಂಬರ್ 11ರ ದಾಳಿಯ ನಂತರದ ಜೀವನ ಕಥೆಯನ್ನು ಒಳಗೊಂಡಿದೆ. ಆತ ಕ್ಲೋತ್ಸ್ ಬ್ರ್ಯಾಂಡ್‌ನ ಒಂದು ಫ್ಯಾಷನ್ ಸಂಸ್ಥೆಯನ್ನು ಹೊಂದಿದ್ದಾರೆ, ಇದು ಮೂಲಭೂತವಾಗಿ ಆತನ ಅಚ್ಚುಮೆಚ್ಚಿನ ಜೀನ್ಸ್ ಬಟ್ಟೆಯನ್ನು ಒಳಗೊಂಡಿದೆ. == ವೈಯಕ್ತಿಕ ಜೀವನ == ಅಬ್ರಾಹಂ 2002ರಿಂದ ನಟಿ ಬಿಪಾಶ ಬಸು ಜತೆಗೆ ಡೇಟಿಂಗ್ ಮಾಡುತ್ತಿದ್ದಾರೆ. ಈ ಜೋಡಿಯನ್ನು ಹೆಚ್ಚಾಗಿ ಭಾರತದಲ್ಲಿನ ಸೂಪರ್ ಜೋಡಿ ಎಂದು ಹೇಳಲಾಗುತ್ತದೆ. === ಸಾಮಾಜಿಕ ಹೋರಾಟ === ಅಬ್ರಾಹಂ ಸಾಮಾಜಿಕ ಹೋರಾಟ ಮತ್ತು ಪ್ರಚೋದನಾ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುತ್ತಾರೆ ಹಾಗೂ ಇಂತಹ ಮಾನವೀಯ ಕೆಲಸಗಳಲ್ಲಿ ಯವಜನರಿಗೂ ಕೈಜೋಡಿಸುವಂತೆ ಹೇಳುತ್ತಾರೆ. ಈ ಕೆಲಸದ ಬಗ್ಗೆ ಕೇಳಿದಾಗ, ಆತ ಹೀಗೆಂದು ಹೇಳಿದರು: . ಆತ ಮುಂಬಯಿನ ಲೀಲಾವತಿ ಹಾಸ್ಪಿಟಲ್ ಆಂಡ್ ರಿಸರ್ಚ್ ಸೆಂಟರ್‌ ಒಂದಿಗೂ ಸಂಬಂಧ ಹೊಂದಿದ್ದಾರೆ, ಆ ಆಸ್ಪತ್ರೆಗೆ ಆತ ಹತ್ತು ಲಕ್ಷಗಳ ಚೆಕ್ಅನ್ನು ದಾನವಾಗಿ ನೀಡಿದರು. 2009ರ ಜನವರಿಯಲ್ಲಿ ಅಬ್ರಾಹಂ ಮುಂಬಯಿಯ ಮ್ಯಾರಾಥಾನ್‌ನಲ್ಲಿ ಯುನೈಟೆಡ್ ವೇಗೆ ಪ್ರಯೋಜನಕಾರಿಯಾದ ವಾರ್ಷಿಕ ಸಮಾರಂಭದಲ್ಲಿ ಭಾರತೀಯ ಹೆಸರಾಂತ ವ್ಯಕ್ತಿಗಳ ಗುಂಪಿನ ಮುಂದಾಳತ್ವವಹಿಸಿದರು. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == === === == ಚಲನಚಿತ್ರಗಳ ಪಟ್ಟಿ == == ಇವನ್ನೂ ಗಮನಿಸಿ == ಭಾರತೀಯ ನಟರ ಪಟ್ಟಿ ಜಾನ್ ಅಬ್ರಾಹಂ ಎಂಟರ್ಟೈನ್ಮೆಂಟ್ == ಟಿಪ್ಪಣಿಗಳು == == ಬಾಹ್ಯ ಕೊಂಡಿಗಳು == ., ಅಧಿಕೃತ ವೆಬ್‌ಸೈಟ್ ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ